ಹದಿ ಹರೆಯದ ಮುಗ್ಧ ಪ್ರೀತಿಯ ಸಿನಿಮಾ - ಗಂಟು ಮೂಟೆ
೯೦ ರ ದಶಕದ ಹದಿ ಹರೆಯದ ಹುಡುಗಿಯ (ಮೀರಾ) ಪ್ರೀತಿ ಮತ್ತು ಅದರ ಸುತ್ತ ಹೆಣೆದಿರುವ ಕಥೆಯೇ ಗಂಟು ಮೂಟೆ. ಕನ್ನಡ ಸಿನಿಮಾದಲ್ಲಿ ಸ್ತ್ರೀ ಪ್ರಧಾನ ಮತ್ತು ಹೆಣ್ಣಿನ ಭಾವನೆಗಳನ್ನು ಬಿಂಬಿಸುವ ಚಿತ್ರಗಳು ತುಂಬಾನೇ ವಿರಳ. ಹೀಗಿರುವಾಗ ನಿರ್ದೇಶಕರಾದ ರೂಪಾ ರಾವ್ ರವರು ಇಂತಹ ಒಂದು ಚಿತ್ರವನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ಮೆಚ್ಚಲೇ ಬೇಕು.
ರೂಪಾ ರಾವ್ ರವರು ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡಿ ಸಿನಿಮಾ ಮಾಡಬೇಕೆಂಬ ಹುಮ್ಮಸ್ಸಿನಿಂದ ಕೆಲಸವನ್ನು ಬಿಟ್ಟು ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಹೊಸ ಮುಖಗಳಾದ ತೇಜು ಬೆಳವಾಡಿ ಮತ್ತು ನಿಶ್ಚಿತ್ ಕೊರೋಡಿಯವರಿದ್ದಾರೆ.
ಈ ಚಿತ್ರಕ್ಕೆ ಪೋಸ್ಟರ್ ಮಾಡಿರುವವರು ಕೆಜಿಫ್ ಮತ್ತು ಪೈಲ್ವಾನ್ ಮುಂತಾದ ಬಿಗ್ ಬಜೆಟ್ ಸಿನಿಮಾಗಳಿಗೆ ಪೋಸ್ಟರ್ ಮಾಡಿ ಕೊಟ್ಟಿರುವ ಕಾಣಿ ಸ್ಟುಡಿಯೋ (http://kaanistudio.com/) ಮತ್ತು ಈ ಸಿನಿಮಾದ merchandise partner ಬೆಂಕಿ ಸ್ಟೋರ್ (https://benkistore.com).
ಗಂಟು ಮೂಟೆ ಸಿನಿಮಾದ ಪೋಸ್ಟರ್:
ಸಿನಿಮಾದ ಟ್ರೈಲರ್ ಕೂಡ ಸದ್ದು ಮಾಡಿದ್ದು ಚಿತ್ರ ವೀಕ್ಷಕರಲ್ಲಿ ಒಂದು ಉತ್ತಮ ಸಿನಿಮಾದ ಆಶಾ ಭಾವನೆಯನ್ನು ತರಿಸಿದೆ.
ಗಂಟು ಮೂಟೆ ಸಿನಿಮಾದ ಟ್ರೈಲರ್:
ಸಿನಿಮಾದ ನಿರ್ದೇಶಕರಾದ ರೂಪಾ ರಾವ್ ರವರು ಉತ್ತಮವಾದ ಪ್ರಚಾರವನ್ನು ಮಾಡಿದ್ದು ಸಿನಿಮಾ ಸಕ್ಸಸ್ ಆಗಲು ಎಲ್ಲಾ ತರಹದ ಪ್ರಯತ್ನವನ್ನು ಮಾಡಿದ್ದಾರೆ.
ಗಂಟು ಮೂಟೆ ಸಿನಿಮಾದ ಪ್ರೆಸ್ ಕಾನ್ಫರೆನ್ಸ್:
ಈ ಸಿನಿಮಾ ಹಲವು ಅಂತರ್ ರಾಷ್ಟ್ರೀಯ ಮಟ್ಟದ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ನಾಮ ನಿರ್ದೇಶನ ಮಾಡಿದ್ದು, ಎಲ್ಲ ಕಡೆಗಳಲ್ಲಿ ಜಯ ಗಳಿಸಿ ಮಾದರಿ ಸಿನಿಮಾ ಆಗಲಿ ಎಂಬುದು ನಮೆಲ್ಲರ ಹಾರೈಕೆ.
ಗಂಟು ಮೂಟೆ ಸಿನಿಮಾದ merchandise:
https://benkistore.com/collections/gantumoote
ಎಲ್ಲರೂ ಕೊಳ್ಳಿ ಸಿನಿಮಾವನ್ನು ಪ್ರೋತ್ಸಾಹಿಸಿ.