ಬಿಗ್ ಬಾಸ್ ಮನೆಯಲ್ಲಿ"ಶೈನ್" ಆದ ಸಾಹಸ ಸಿಂಹ ಟಿ ಶರ್ಟ್
News

ಬಿಗ್ ಬಾಸ್ ಮನೆಯಲ್ಲಿ"ಶೈನ್" ಆದ ಸಾಹಸ ಸಿಂಹ ಟಿ ಶರ್ಟ್

ಇದೀಗ ಕಳೆದ ಒಂದು ವಾರದಿಂದ ಬಿಗ್ ಬಾಸ್ ಶೋ ಆರಂಭವಾಗಿರುವುದು ಎಲ್ಲರಿಗೆ ತಿಳಿದಿರುವ ಸಂಗತಿ. ಈ ಶೋನಲ್ಲಿ ಹದಿನೆಂಟು ಸ್ಪರ್ಧಿಗಳಿದ್ದು, ಇವರಲ್ಲಿ ಯಾರು ಜಯ ಗಳಿಸುತ್ತಾರೆ ಎನ್ನುವುದು ಕುತೂಹಲವನ್ನು ಉಂಟು ಮಾಡಿದೆ.  ಈ ಶೋನಲ್ಲಿ ೧೭ನೇ ಸ್ಪರ್ಧಿ ಕುಂದಾಪುರದ ಶ್ರೀಯುತ ಶೈನ್ ಶೆಟ್ಟಿ.

 ಲಕ್ಷ್ಮಿ ಬಾರಮ್ಮದ ಚಂದನ್ 

ಕಿರು ತೆರೆಯ ಕಲಾವಿದರುವ ಶೈನ್ ಶೆಟ್ಟಿ  ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಂದನ್ ಹೆಸರಿನಲ್ಲಿ ಪಾತ್ರ ನಿಭಾಯಿಸಿದವರು. ಸುಮಾರು ೨ ವರ್ಷಗಳ ಕಾಲ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಇವರು ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

 ಸಾಹಸ ಸಿಂಹ ಟಿ ಶರ್ಟ್ ನಲ್ಲಿ ಮಿಂಚಿದ ತಾರೆ

ಈ ಶೋ ನ ಮೂರನೇ ಎಪಿಸೋಡಿನಲ್ಲಿ ಶೈನ್ ಶೆಟ್ಟಿಯವರು ಬೆಂಕಿ  ಸ್ಟೋರ್ನವರು(benkistore.com) ಡಿಸೈನ್ ಮಾಡಿರುವ ಅಭಿನಯ ಭಾರ್ಗವ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಚಿತ್ರವುಳ್ಳ ಟಿ ಶರ್ಟ್ ಅನ್ನು ಹಾಕಿರುವುದು ಎಲ್ಲರಲ್ಲೂ ಆಸಕ್ತಿಯನ್ನು ಮೂಡಿಸಿದೆ. ಈ ಮೂಲಕ ಶೈನ್ ಶೆಟ್ಟಿಯವರು ಜನರ ಮನಸನ್ನು ತಮ್ಮತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

 ಸಾಹಸ ಸಿಂಹ ಟಿ ಶರ್ಟ್

ಈ ಎಪಿಸೋಡಿನಲ್ಲಿ ಶೈನ್ ಶೆಟ್ಟಿಯವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸುರುವ ಪ್ರಿಯಾಂಕ ಅವರನ್ನು ಛೇಡಿಸಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಶೈನ್ ಶೆಟ್ಟಿ ಎಲ್ಲ ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿ ಹೊರ ಹೊಮ್ಮಲಿ ಎನ್ನುವುದು ನಮ್ಮೆಲ್ಲರ ಆಶಯ.

Tshirt Link: https://benkistore.com/collections/vishnuvardhan